ಬಿ ಎಲ್‌ಡಿ ಈ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾ ವಿದ್ಯಾಲಯ ವಿಜಯಪುರ ಎನ್ಎಸ್ಎಸ್ ಘಟಕ 1 ಮತ್ತು ಎನ್ಎಸ್ಎಸ್ ಘಟಕ 2 ಇವುಗಳ ಅಡಿಯಲ್ಲಿ ಸ್ವಚ್ಛತಾ ಭಾರತ್ ದಿವಸ್ ಅಭಿಯಾನವನ್ನು ಐತಿಹಾಸಿಕ ಸ್ಮಾರಕವಾದ ಗೋಲ್ ಗುಂಬಜ್ ನಲ್ಲಿ ಇಂದು ಬೆಳಿಗ್ಗೆ 7:00ಗೆ ಹಮ್ಮಿಕೊಳ್ಳಲಾಗಿತ್ತು, ಈ ಅಬಿಯಾನದಲ್ಲಿ ಎನ್ಎಸ್ಎಸ್ ಘಟಕಗಳ ಸ್ವಯಂ ಸೇವಕಿಯರು ಗೋಲ್ ಗುಂಬಜ್ ನ ಆವರಣವನ್ನು ಸ್ವಚ್ಛಗೊಳಿಸಿದರು ಈ ಸ್ವಚ್ಛತಾ ಭಾರತ್ ಅಭಿಯಾನದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವೈ ತಮ್ಮಣ್ಣ, ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ವಿ ಎಸ್ ನಂದೇಶ,ಸಂಖ್ಯಾಶಾಸ್ತ್ರ ಭಾಗದ ಮುಖ್ಯಸ್ಥರಾದ ಡಾ. ಎ ಟಿ ಶ್ರೀನಿವಾಸ್ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮಲ್ಲಿಕಾರ್ಜುನ್ ಕೆಂಗನಾಳ ,ಕನ್ನಡ ವಿಭಾಗದ ಡಾ. ರೇಣುಕಾದೇವಿ ಕಮತರ್, ಶ್ರೀ ಮಹಬೂಬ್ ಜಮಾದಾರ್, ರಾಜ್ಯಶಾಸ್ತ್ರ ವಿಭಾಗದ ಸೌಜನ್ಯ ಬೀಳಗಿ, ಇತಿಹಾಸ ವಿಭಾಗದ ಚಂದ್ರಕಲಾ ದೊಡಮನಿ ಈ ಎಲ್ಲಾ ಉಪನ್ಯಾಸಕರು ಪಾಲ್ಗೊಂಡು ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಎನ್ ಎಸ್ ಎಸ್ ನ 170 ಸ್ವಯಂಸೇವಿಕೆಯರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.