*ದತ್ತಿ ಉಪನ್ಯಾಸ ಕಾರ್ಯಕ್ರಮ*. ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಕನ್ನಡ ವಿಭಾಗ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಯುವ ವೇದಿಕೆ ಮತ್ತು ಜಿಲ್ಲಾ ಕದಳಿ ಮಹಿಳಾ ವೇದಿಕೆ ವಿಜಯಪುರ ಇವುಗಳ ಸಂಯು ಕ್ತಾಶ್ರಯದಲ್ಲಿ ದಿನಾಂಕ:14/12/2023 ರ ಬೆಳಿಗ್ಗೆ -09-00 ಘಂಟೆಗೆ *ಶರಣರ ವಚನಗಳಲ್ಲಿ ಜೀವನ ಮೌಲ್ಯ* ಎಂಬ ವಿಷಯದ ಕುರಿತು *ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು* ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕರಾಗಿ ಶ್ರೀ ಬಸವರಾಜ ಎಲಿಗಾರ ಡೆಪ್ಯೂಟಿ ಸುಪರಿಂಟೆoಡೆoಟ್ ಆಫ್ ಪೊಲೀಸ್,ವಿಜಯಪುರ ಅವರು ಆಗಮಿಸಿ ತಮ್ಮ ಅಮೂಲ್ಯವಾದ ಜ್ಞಾನವನ್ನು ಎಲ್ಲರಿಗೂ ಹಂಚಿದರು.ಶ್ರೀ ಜಂಬುನಾಥ ಕಂಚ್ಯಾನಿ ಜಿಲ್ಲಾ ಶ.ಸಾ.ಪರಿಷತ್, ವಿಜಯಪುರ ಅವರು ಮುಖ್ಯ ಅತಿಥಿ ಭಾಷಣವನ್ನು ಆಡಿದರು. ಶ್ರೀ ಅಮರೇಶ ಸಾಲಕ್ಕಿ ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಯುವ ವೇದಿಕೆ, ವಿಜಯಪುರ ಅವರು ಆಶಯ ನುಡಿಗಳನ್ನಾ ಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ Dr.y. ತಮ್ಮಣ್ಣ ಅಧ್ಯಕ್ಷನುಡಿಗಳನ್ನಾ ಡಿದರು. ಐಕ್ಯೂಎಸಿ ಸಂಯೋಜಕರಾದ ಶ್ರೀ. ವಿ.ಎಸ್ ನಂದೀಶ. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸವಿತಾ ಎನ್.ಲಮಾಣಿ, ದಾಸೋಹಿಗಳಾದ ಶ್ರೀ ಸಿದ್ರಾಮಪ್ಪ ಉಪ್ಪಿನ, ಶ್ರೀ. ರಾಜೇಂದ್ರ ಬಿದರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 22 ಜನ ಬೋಧಕ ಸಿಬ್ಬಂದಿ, 200 ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.