ಬಿ.ಎಲ್.ಡಿ.ಈ. ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ-1 ಮತ್ತು ಘಟಕ-2 ರ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು(22-23) ಹಮ್ಮಿಕೊಂಡಿದ್ದು ಇದರ ಪ್ರಯುಕ್ತ ದಿನಾಂಕ : 22/07/23 ರಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಾಗೂ ಕುಟುಂಬ ನಿರ್ವಹಣೆಯಲ್ಲಿ ಉದ್ಯೋಗಸ್ಥ ಮಹಿಳೆಗಿರುವ ಸವಾಲು ಮತ್ತು ಸಮಸ್ಯೆಗಳು ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಂಜುನಾಥ ಜುನಗೊಂಡ ಅಂಕಣ ಬರಹಗಾರರು, ಉಪನ್ಯಾಸಕರು, ಮಾಧ್ಯಮ ಸಲಹೆಗಾರರು ಜೆಎಸ್ಎಸ್ ಆಸ್ಪತ್ರೆ ವಿಜಯಪುರ-ಅವರು ಆಗಮಿಸಿ ಒಬ್ಬ ಉದ್ಯೋಗಸ್ಥ ಮಹಿಳೆ ಉದ್ಯೋಗ ಮತ್ತು ಕುಟುಂಬ ಎಂಬ ಎರಡು ದೋಣಿಗಳ ಮೇಲೆ ಪಯಣಿಸುವ ಸಂದರ್ಭದಲ್ಲಿ ಮಹಿಳೆ ಎದುರಿಸುವ ಸಮಸ್ಯೆ ಮತ್ತು ಸವಾಲುಗಳ ಕುರಿತು ಸವಿಸ್ತಾರವಾಗಿ ವಿಶೇಷ ಉಪನ್ಯಾಸವನ್ನು ನೀಡಿದರು. ಅತಿಥಿಗಳಾಗಿ ಆಗಮಿಸಿದ ಡಾ//ರವೀಂದ್ರಗೌಡ ಕೆ, ಡಾ//ಯಲ್ಲಪ್ಪ ನಾಯಕ ಅವರು ಕಾರ್ಯಕ್ರಮವನ್ನುದ್ದೇಷಿಸಿ ಮಾತನಾಡಿದರು. ಅಧ್ಯಕ್ಷೀಯ ಸ್ಥಾನ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವೈ ತಮ್ಮಣ್ಣ ಅವರು ಅಧ್ಯಕ್ಷ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂ ಎಸಿ ಸಂಯೋಜಕರಾದ ಜಯಶ್ರೀ ಬೀರಪ್ಪ, ಎನ್ಎಸ್ಎಸ್ ಘಟಕ-1 ರ ಶಿಬಿರಾಧಿಕಾರಿಗಳಾದ ಶ್ರೀ ವಿ.ಎಸ್.ನಂದೇಶ ಘಟಕ-2 ರ ಅಧಿಕಾರಿಗಳಾದ ಶ್ರೀಮತಿ ಸವಿತಾ ಎನ್ ಲಮಾಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೋಧಕ ಸಿಬ್ಬಂದಿ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.